ಡಿಸೆಂಬರ್ ೩೧ - ಡಿಸೆಂಬರ್ ತಿಂಗಳ ಮೂವತ್ತ ಒಂದನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಕೊನೆಯ ಅಂದರೆ ೩೬೫ನೆ ದಿನ (ಅಧಿಕ ವರ್ಷದಲ್ಲಿ ೩೬೬ನೇ ದಿನ). ಡಿಸೆಂಬರ್ ೨೦೨೪ == ಪ್ರಮುಖ ಘಟನೆಗಳು == ೪೦೬ - ವಾಂಡಲರು, ಅಲನರು ಮತ್ತು ಸ್ಯುಬಿ ಜನರು ರೈನ್ ನದಿಯನ್ನು ದಾಟಿ ಗೌಲ್ ಅನ್ನು ಆಕ್ರಮಿಸಿದರು. ೧೬೦೦ - ಮೊದಲನೇ ಎಲಿಜಬೆಥ್ ಒಪ್ಪಿಗೆಯಡಿಯಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಸ್ಥಾಪನೆ. ೧೯೬೩ - ಮಧ್ಯ ಆಫ್ರಿಕಾ ಒಕ್ಕೂಟ ಅಧಿಕೃತವಾಗಿ ಕೊನೆಗೊಂಡು ಮುಂದೆ ಜಾಂಬಿಯ, ಮಲಾವಿ ಮತ್ತು ರೊಢೇಶಿಯ ಸ್ಥಾಪನೆಗೊಂಡವು. ೧೯೯೧ - ಸೋವಿಯೆಟ್ ಒಕ್ಕೂಟ ಅಧಿಕೃತವಾಗಿ ಕೊನೆಗೊಂಡಿತು. ೧೯೯೯ - ರಷ್ಯಾದ ಮೊದಲ ರಾಷ್ಟ್ರಪತಿ ಬೊರಿಸ್ ಯೆಲ್ತ್ಸಿನ್ ರಾಜಿನಾಮೆ ನೀಡಿ ವ್ಲಾಡಿಮೀರ್ ಪುತಿನ್ ಅನ್ನು ತಾತ್ಕಾಲಿಕವಾಗಿ ಆ ಪದವಿಗೆ ನೇಮಿಸಿದನು. == ಜನನ == ೧೭೩೮ - ಚಾರ್ಲ್ಸ್ ಕಾರ್ನ್‌ವಾಲಿಸ್, ಬ್ರಿಟಿಶರ ಆಳ್ವಿಕೆಯಲ್ಲಿ ಭಾರತದ ಗವರ್ನರ್ ಜನರಲ್ ೧೯೧೦ - ಮಲ್ಲಿಕಾರ್ಜುನ ಮನ್ಸೂರ್, ಕಾಳಿದಾಸ ಸಮ್ಮಾನ್ ಪ್ರಶಸ್ತಿ ವಿಜೇತ ಸಂಗೀತಗಾರ ೧೯೩೭ - ಆಂಥನಿ ಹಾಪ್ಕಿನ್ಸ್, ಬ್ರಿಟನ್‌ನ ಖ್ಯಾತ ನಟ ೧೯೪೩ - ಬೆನ್ ಕಿಂಗ್ಸ್ಲೆ, ಇಂಗ್ಲೆಂಡ್ನ ನಟ. ೧೯೫೫ - ದಾವೂದ್ ಇಬ್ರಾಹಿಮ್, ಭಯೋತ್ಪಾದಕ. == ನಿಧನ == ೧೯೨ - ಕಾಮೊಡಸ್, ರೋಮ್ ಸಾಮ್ರಾಜ್ಯದ ಚಕ್ರವರ್ತಿ. ೧೯೭೧ - ವಿಕ್ರಮ್ ಸಾರಾಭಾಯ್, ಭಾರತದ ಭೌತಶಾಸ್ತ್ರ ತಜ್ಞ. == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ